ಖೇಚೆಯೋಪಾಲ್ರಿ ಸರೋವರವು ಈಶಾನ್ಯ ಭಾರತದ ಸಿಕ್ಕಿಂ ರಾಜ್ಯದ ಪಶ್ಚಿಮ ಸಿಕ್ಕಿಂ ಜಿಲ್ಲೆಯಲ್ಲಿ ಸ್ಥಿತವಾಗಿದೆ. ಈ ಸರೋವರವು ಬೌದ್ಧರು ಮತ್ತು ಹಿಂದೂಗಳಿಬ್ಬರಿಗೂ ಪವಿತ್ರವಾಗಿದೆ ಮತ್ತು ಬಯಕೆಯನ್ನು ಪೂರೈಸುವ ಸರೋವರ ಎಂದು ನಂಬಲಾಗಿದೆ. ಸರೋವರದ ಸ್ಥಳೀಯ ಹೆಸರು ಶೋ ಡ್‍ಜ಼ೋ ಶೋ, ಇದರರ್ಥ "ಓ ಸ್ತ್ರೀ, ಇಲ್ಲಿ ಕುಳಿತುಕೊ". ಇದು ಖೇಚೋಡ್‍ಪಾಲ್ದ್ರಿ ಬೆಟ್ಟದ ಮಧ್ಯದಲ್ಲಿದ್ದು ಸುತ್ತುವರಿಯಲ್ಪಟ್ಟಿದೆ. ಇದಿರುವ ಬೆಟ್ಟವನ್ನು ಪವಿತ್ರ ಬೆಟ್ಟವೆಂದು ಪರಿಗಣಿಸಲಾಗಿದೆ. ಈ ಸರೋವರವು ಹೆಚ್ಚು ಪೂಜ್ಯ ಕಣಿವೆಯಾದ "ಡೆಮಜ಼ಾಂಗ್" ನ (ಅಂದರೆ ಅಕ್ಕಿಯ ಕಣಿವೆ) ಅವಿಭಾಜ್ಯ ಅಂಗವಾಗಿದೆ . ಈ ಭೂದೃಶ್ಯವು ಗುರು ಪದ್ಮಸಂಭವರಿಂದ ಆಶೀರ್ವದಿಸಲ್ಪಟ್ಟ ಗುಪ್ತ ನಿಧಿಗಳ ಭೂಮಿ ಎಂದೂ ಕರೆಯಲ್ಪಡುತ್ತದೆ. ಸರೋವರದ ಒಂದು ಕುತೂಹಲಕಾರಿ ವೈಶಿಷ್ಟ್ಯವೆಂದರೆ ಎಲೆಗಳು ಸರೋವರದ ಮೇಲೆ ತೇಲುವುದಿಲ್ಲ. ಯಾವುದೇ ಎಲೆಯು ಸರೋವರದ ಮೇಲ್ಮೈಗೆ ಬಿದ್ದ ತಕ್ಷಣ ಅವುಗಳನ್ನು ಪಕ್ಷಿಗಳು ಶ್ರಮದಾಯಕವಾಗಿ ಎತ್ತಿಕೊಳ್ಳುತ್ತವೆ. == ಚಿತ್ರಸಂಪುಟ == == ಉಲ್ಲೇಖಗಳು == == ಹೊರಗಿನ ಕೊಂಡಿಗಳು == 2018-01-19 ವೇಬ್ಯಾಕ್ ಮೆಷಿನ್ ನಲ್ಲಿ.